ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಪಾಕಿಸ್ತಾನ ಮೂಲದ ಯುನಿನಾರ್ ಮೊಬೈಲ್ ಸಂಸ್ಥೆಯ ಮೇಲೆ ಶ್ರೀರಾಮಸೇನೆಯ ಕೆಂಗಣ್ಣು

ಭಟ್ಕಳ: ಪಾಕಿಸ್ತಾನ ಮೂಲದ ಯುನಿನಾರ್ ಮೊಬೈಲ್ ಸಂಸ್ಥೆಯ ಮೇಲೆ ಶ್ರೀರಾಮಸೇನೆಯ ಕೆಂಗಣ್ಣು

Sun, 03 Jan 2010 02:41:00  Office Staff   S.O. News Service
ಭಟ್ಕಳ, ಜನವರಿ 2:ಪಾಕಿಸ್ತಾನದ ಮೂಲದೆಂದು ಹೇಳಲಾಗಿರುವ ಯುನಿನಾರ್ ಮೊಬೈಲ್ ಕಂಪನಿಯು ಭಾರತದಲ್ಲಿ ಅತ್ಯಂತ ಆದ್ದೂರಿ ಪ್ರಚಾರವನ್ನು ಮಾಡಿ ಆರಂಭಿಸಿದ್ದು ಈಗ ಅದು ಇಲ್ಲಿನ ರಾಮಸೇನೆಯ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದು ಈ ಕುರಿತು ಭಟ್ಟಳದ ರಾಮ ಸೇನೆ ಕಾರ್ಯಕರ್ತರು ತಹಸಿಲ್ದಾರ ಮೂಲಕ ರಾಷ್ಟ್ರಪತಿಯವರಿಗೆ ಮನವಿಯನ್ನು ಕಳುಹಿಸಿದ್ದು ಭಾರತದಲ್ಲಿ ಯುನಿನಾರ್ ಕಂಪನಿಯ ಸಿಮ್‌ಗಳ ಮಾರಾಟವನ್ನು ನಿಷೇಧಿಸಬೇಕೆಂದು ಅದು ಮನವಿಯಲ್ಲಿ ತಿಳಿಸಿದೆ. 

ಪಾಕಿಸ್ತಾನ ಮೂಲದ ಈ ಕಂಪನಿಯ ಸಿಮ್ ಮಾರಾಟದಿಂದಾಗಿ ಇಲ್ಲಿ ಮತ್ತಷ್ಟು ಭಯೋತ್ಪಾದನ ಚಟುವಟಿಕಗಳು ಹೆಚ್ಚುವ ಸಾಧ್ಯತೆಗಳಿದ್ದು ಕಳೆದ ೫೬ ವರ್ಷಗಳಿಂದ ಭಾರತದಲ್ಲಿ ಭಯೋತ್ಪಾದನ ಚಟುವಟಿಕೆಯನ್ನು ನಡೆಸುತ್ತಲೆ ಬಂದಿರುವ ಇಲ್ಲಿ ಹಲವಾರು ಭಯೋತ್ಪಾದಕ ಸಂಘಟನೆಗಳನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದೆ. ಆದ್ದರಿಂದ ದೇಶದ ಯಾವುದೆ ಉತ್ಪಾದನೆಗಳು ನಮಗೆ ಬೇಡ ವೆಂದು ಮನವಿಯಲ್ಲಿ ತಿಳಿಸಿದೆ. 

ಚಿತ್ರ, ವರದಿ: ಎಮ್ಮಾರ್ ಮಾನ್ವಿ, ಭಟ್ಕಳ

Share: